ಸ್ವಾತಂತ್ರ್ಯಾಮೃತ ರಾಷ್ಟ್ರಭಕ್ತಿಯನ್ನು ಸಾರುವ ಪ್ರಾಯೋಗಿಕ ಯಕ್ಷಗಾನ
ರಾಷ್ಟ್ರೀಯ ಗೀತೆ ವಂದೇ ಮಾತರಂ 150ನೇ ವರ್ಷದ ನೆನಪಿನಲ್ಲಿ ಕಲಾಕದಂಬ ಆರ್ಟ್ ಸೆಂಟರ್ ವತಿಯಿಂದ ರಾಷ್ಟ್ರಭಕ್ತಿಯನ್ನು ಸಾರುವ ಪ್ರಾಯೋಗಿಕ ಯಕ್ಷಗಾನ ಪ್ರದರ್ಶದ ಝಲಕ್ ಇದು. ಯಕ್ಷಗಾನದ ಚೌಕಟ್ಟಿನಲ್ಲಿ ನವರಸ ಭರಿತ ಯಕ್ಷಗಾನ ಪ್ರಸಂಗ ಇದಾಗಿದ್ದು. ಆರ್ಟ್ ಸೆಂಟರ್ ನ ವಿದ್ಯಾರ್ಥಿಗಳು ಮತ್ತು ಗುರುಗಳ ಸಾಂಘಿಕ ಪ್ರಯತ್ನವಿದೆ. ಡಾ. ರಾಧಾಕೃಷ್ಣ ಉರಾಳ ಇವರ ರಚನೆ ಮತ್ತು ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಈ ಕಥಾನಕವನ್ನು ಭರತ್ ರಾಜ್ ಪರ್ಕಳ ನಿರ್ದೇಶಿಸಿದ್ದಾರೆ. ದಿನೇಶ್ ಉಪ್ಪೂರು, ಸುಬ್ರಾಯ ಹೆಬ್ಬಾರ್ ಮತ್ತು ಭರತ್ ರಾಜ್ ಪರ್ಕಳರ ಜೊತೆಯಾದ ಸಾಹಿತ್ಯ ಸಾಂಗತ್ಯವಿದೆ. ಎರಡು ತಾಸು ಎಲ್ಲಿಯೂ ನೀರಸವೆನಿಸದ ಈ ಪ್ರದರ್ಶನದ ವ್ಯಾಪ್ತಿ ಮುಂಬರುವ ದಿನಗಳಲ್ಲಿ ಹೆಚ್ಚಲಿ. ಜೊತೆಯಲಿ ಪ್ರದರ್ಶನಗಳು ಬೇಕಿದ್ದಲ್ಲಿ ಡಾ. ರಾಧಾಕೃಷ್ಣ ಉರಾಳ ಇವರನ್ನು ಸಂಪರ್ಕಿಸಬಹುದು. ಧನ್ಯವಾದಗಳು.
ಸಂಪರ್ಕ: ಡಾ. ರಾಧಾಕೃಷ್ಣ ಉರಾಳ - +91 9448510582
💬 0 Comments
Share your thoughts about this post
Leave a Comment
Your comment will appear after admin approval.