ಯಕ್ಷಪಥದ ಮೊದಲು…

ಸುಬ್ರಾಯ ಹೆಬ್ಬಾರರ ಯಕ್ಷಪಥದ ಬಗ್ಗೆ ಮಾತನಾಡುವ ಮೊದಲು, ಅವರ ಯಕ್ಷಗಾನ ಯಾನದ ಬಗ್ಗೆ ಒಂದಿಷ್ಟು ಮಾತನಾಡಲೇಬೇಕು. ಯಾಕೆಂದರೆ, ಅವರು ನಾನು ಕಂಡಿರುವ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು.

ನಾನು ಸುಮಾರು ಹತ್ತು ವರ್ಷದವನಿದ್ದಾಗಿನಿಂದ ಅವರನ್ನು ನೋಡುತ್ತಾ ಬಂದಿದ್ದೇನೆ. ಆ ಕಾಲದಲ್ಲಿ ಯಕ್ಷಗಾನ ಕಲಾವಿದರನ್ನು ನೋಡುವುದೇ ನಮಗೆ ಒಂದು ದೊಡ್ಡ ಖುಷಿ, ಒಂದು ವಿಸ್ಮಯ. ಮಾರಣಕಟ್ಟೆ ಮೇಳದ ಚೌಕಿಯ ಪರದೆಯನ್ನು ಸ್ವಲ್ಪ ಸರಿಸಿ, ಒಳಗೆ ನಡೆಯುತ್ತಿದ್ದ ಕಲೆಯನ್ನು ತಾಸುಗಟ್ಟಲೆ ಕಣ್ತುಂಬಿಕೊಳ್ಳುತ್ತಿದ್ದ ದಿನಗಳು ಇನ್ನೂ ಕಣ್ಣ ಮುಂದೆ ಬರುತ್ತವೆ. ಕಲಾವಿದರೆಂದರೆ ನಮಗೆ ಅಚ್ಚರಿ… ಕುತೂಹಲ… ಒಂದು ರೀತಿಯ ಆರಾಧನೆ.

ಅದೇ ಸಮಯದಲ್ಲಿ ನಮ್ಮೂರಿನ ಸಂಘದ ಆಟಗಳಿಗೆ ಬರುತ್ತಿದ್ದ ಸುಬ್ರಾಯ ಹೆಬ್ಬಾರರು, ಯಕ್ಷಗಾನದ ಸರ್ವ ವಿಧಗಳಲ್ಲೂ ಎಷ್ಟು ಸಹಜವಾಗಿ, ಲೀಲಾಜಾಲವಾಗಿ ತೊಡಗಿಸಿಕೊಳ್ಳುತ್ತಿದ್ದರು ಎಂಬುದು ಇಂದಿಗೂ ನೆನಪಿದೆ. ಒಂದು ಕಡೆ ಕೊಪ್ಪಟಿ ಮುತ್ತ ಗೌಡರ ಟ್ರಯಲ್, ಮತ್ತೊಂದು ಕಡೆ ಹೆರಂಜಾಲು ಸುಬ್ಬಣ್ಣ ಗಾಣಿಗರ ಪದ್ಯ ಮತ್ತು ಹೆಜ್ಜೆ… ಇವೆಲ್ಲವನ್ನೂ ನೋಡುವುದಕ್ಕಾಗಿಯೇ ಹೋಗುತ್ತಿದ್ದ ದಿನಗಳವು. ಆಗಾಗ್ಗೆ ಹೆಬ್ಬಾರರೂ ಅಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಟ್ರಯಲ್ ಮುಗಿಸಿ ಮನೆಗೆ ಹಿಂದಿರುಗುವಾಗ, “ನಾನೂ ಒಂದು ದಿನ ಆ ಬಲಗೋಣು ಮಾಣಿಯಂತೆ ಆಗಬೇಕು…” ಎಂಬ ಕನಸನ್ನು ಹೊತ್ತುಕೊಂಡೇ ಮನೆಗೆ ಬರುತ್ತಿದ್ದ ನೆನಪು ಇಂದಿಗೂ ನನ್ನೊಳಗೆ ಹಸಿರಾಗಿದೆ.

ನನ್ನ ಅಪ್ಪ ಕೂಡ ಹಲವು ಬಾರಿ ಹೇಳುತ್ತಿದ್ದರು “ಅಂದಿನ ಕಾಲದಲ್ಲಿ ಸಂಘದ ಮೇಳಗಳ ಜೋಡಾಟ ಆಗುತ್ತಿತ್ತು. ನಮ್ಮ ಸಂಘದಲ್ಲಿ ಬಲಗೋಣು ಮಾಣಿ ಇದ್ದರೆ ಸಾಕು… ಎದುರಿಗೆ ಯಾರೇ ಇದ್ದರೂ, ನಮ್ಮ ಸಂಘದ ಮೇಳವೇ ಗೆದ್ದು ಬರುತ್ತಿತ್ತು.” ಎಂದು. ಅದು ಕೇವಲ ಒಬ್ಬ ಕಲಾವಿದನ ಕುರಿತ ಮಾತಲ್ಲ. ಅದು ಅಂದಿನ ಯಕ್ಷಗಾನದಲ್ಲಿ ಹೆಬ್ಬಾರರು ಗಳಿಸಿಕೊಂಡಿದ್ದ ಸ್ಥಾನಕ್ಕೆ ಸಾಕ್ಷಿ. ಕಾಲ ಬದಲಾಯಿತು. ಊರು ಬದಲಾಯಿತು. ಬದುಕಿನ ದಿಕ್ಕು ಬದಲಾಯಿತು. ಆದರೆ ಯಕ್ಷಗಾನದ ಮೇಲಿನ ಅವರ ಪ್ರೀತಿ ಮಾತ್ರ ಬದಲಾಗಲಿಲ್ಲ.

ಅಂದು ರಂಗಸ್ಥಳದಲ್ಲಿ ತನ್ನ ಕಲೆಯಿಂದ ಮೋಡಿ ಮಾಡುತ್ತಿದ್ದ ಬಲಗೋಣು ಮಾಣಿ, ಇಂದು ಮಹಾನಗರ ಬೆಂಗಳೂರಿನಲ್ಲಿ ಯಕ್ಷಗಾನವನ್ನೇ ತನ್ನ ಉಸಿರಾಗಿಸಿಕೊಂಡು, ನೂರಾರು ವಿದ್ಯಾರ್ಥಿಗಳಿಗೆ ಗುರುವಾಗಿ, ನಗರದ ಮೂಲೆ ಮೂಲೆಗಳಲ್ಲಿ ಯಕ್ಷಗಾನದ ಕಂಪನ್ನು ಪಸರಿಸುತ್ತಿದ್ದಾರೆ. ಅವರ ಗರಡಿಯಲ್ಲಿ ಬೆಳೆದ ಎಷ್ಟೋ ಶಿಷ್ಯರು ಇಂದು ಯಕ್ಷಗಾನದ ಕಲಾಭಿಮಾನಿಗಳ ಮನಸ್ಸು ಗೆಲ್ಲುತ್ತಿದ್ದಾರೆ.

ಆತ್ರೇಯ ಗಾವಂಕರ್ ಎಂಬ ಏಳು ವರ್ಷದ ಬಾಲಕನ ಹೆಸರು ಕೇಳಿದರೆ ಸಾಕು—ಅವನ ಪ್ರತಿಭೆ, ಅವನ ಆತ್ಮವಿಶ್ವಾಸ, ಅವನ ಯಕ್ಷಗಾನದ ಮೇಲಿನ ಪ್ರೀತಿ ಯಾರ ಗಮನವನ್ನೂ ಸೆಳೆಯದೇ ಇರದು. ಅದೇ ರೀತಿ ಸಾಧ್ವಿ ಉಡುಪ, ಗಂಗಾ ನಾಯಕ್ ಸೇರಿದಂತೆ ಹಲವು ಕಲಾವಿದರು ಹೆಜ್ಜೆ ಹಾಕುತ್ತಿದ್ದಾರೆ. ಅವರ ಸಹಧರ್ಮಿಣಿಯಾಗಿ, ಅವರ ಗರಡಿಯಲ್ಲಿ ಬೆಳೆದು ಬರುತ್ತಿರುವ ಸಿಂಧೂಶ್ರೀ ಹೆಬ್ಬಾರ್ ಕೂಡ ಇಂದು ಕಲಾಭಿಮಾನಿಗಳಿಂದ “ಭೇಷ್!” ಎನಿಸಿಕೊಳ್ಳುತ್ತಿದ್ದಾರೆ.

ಇವರಿಗೆ, ಇವರೊಂದಿಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ದೊಡ್ಡ ಶಕ್ತಿ ಇದೆ. ಮಳೆಗಾಲದ ಸಮಯದಲ್ಲಿ ಇವರೊಂದಿಗೆ ಜೊತೆಯಾಗುವ ಟ್ರೆಂಡ್ ಹಿಮ್ಮೇಳ.

ಅಕ್ಷಯ್ ಆಚಾರ್ಯ ಬಿದ್ಕಲ್ಕಟ್ಟೆ ಮತ್ತು ಶ್ರೀನಿವಾಸ ಪ್ರಭು ಅವರ ಜೋಡಿ, ಹೆಬ್ಬಾರರೊಂದಿಗೆ ಸೇರಿಕೊಂಡು ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಸೊಬಗನ್ನು ಮಾತ್ರವಲ್ಲ, ಕಲೆಯ ಮೇಲಿನ ಪ್ರೀತಿಯನ್ನೂ ಇನ್ನಷ್ಟು ಗಟ್ಟಿಗೊಳಿಸುತ್ತಿದ್ದಾರೆ. ಅದಕ್ಕಾಗಿಯೇ ಇಂದು ಬೆಂಗಳೂರಿನಲ್ಲಿ ಈ ಹಿಮ್ಮೇಳದ ಮೋಡಿ ಎಲ್ಲೆಡೆ ಸದ್ದು ಮಾಡುತ್ತಿದೆ.

ಇದೀಗ ಸುಬ್ರಾಯ ಹೆಬ್ಬಾರರ ಸಂಸ್ಥೆಯ ಮೊದಲ ಕಾರ್ಯಕ್ರಮ 'ಯಕ್ಷಪಥ', ಇದೇ ಬರುವ ಅಕ್ಟೋಬರ್ 25, ಭಾನುವಾರ, ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ.

ಯಕ್ಷಗಾನದ ಹಲವು ಮಜಲುಗಳ ಅನಾವರಣ…

ಕಲಾವಿದರ ಸನ್ಮಾನ…

ಪ್ರಶಸ್ತಿ ಪ್ರದಾನ…

ಯಕ್ಷಗಾನ ಪ್ರದರ್ಶನ…

ಮತ್ತು ಯಕ್ಷಗಾನದೊಂದಿಗೆ ಬೆಸೆದುಕೊಂಡಿರುವ ಅನೇಕ ವಿಶೇಷ ಕಾರ್ಯಕ್ರಮಗಳು…

ಇದು ಕೇವಲ ಒಂದು ಕಾರ್ಯಕ್ರಮವಲ್ಲ. ಒಬ್ಬ ಕಲಾವಿದನ ದಶಕಗಳ ಯಕ್ಷಗಾನ ಯಾನಕ್ಕೆ ಒಂದು ಗೌರವ. ಒಬ್ಬ ಗುರು ತನ್ನ ಶಿಷ್ಯರಿಗೆ ಕಟ್ಟಿಕೊಟ್ಟಿರುವ ಪರಂಪರೆಗೆ ಒಂದು ಸಂಭ್ರಮ. ಅದಕ್ಕೇ ಈ ಯಕ್ಷಪಥದಲ್ಲಿ ನಿಮ್ಮ ಹೆಜ್ಜೆಯೂ ಇರಬೇಕು. ನಿಮ್ಮ ಪ್ರೋತ್ಸಾಹ, ನಿಮ್ಮ ಉಪಸ್ಥಿತಿ, ನಿಮ್ಮ ಪ್ರೀತಿ—ಇವೆಲ್ಲವೂ ಈ ಪಯಣಕ್ಕೆ ಇನ್ನಷ್ಟು ಬಲ ನೀಡಲಿದೆ. ಬರ್ತೀರಲ್ವಾ?

ಯಕ್ಷಪಥದಲ್ಲಿ ಜೊತೆಯಾಗೋಣ

ಅಂದು ಬಲಗೋಣು ಮಾಣಿ, ಇಂದು ಯಕ್ಷಗುರು : ಇದು ಯಕ್ಷಪಥ
ಯಕ್ಷಪಥದ ಮೊದಲು… ಒಂದು ಕಲಾವಿದನ ಯಕ್ಷಯಾನ ಸುಬ್ರಾಯ ಹೆಬ್ಬಾರರ ‘ಯಕ್ಷಪಥ’ದ ಬಗ್ಗೆ ಮಾತನಾಡುವ ಮೊದಲು, ಅವರು ನಡೆದು ಬಂದ ಯಕ್ಷಗಾನದ ಹಾದಿಯನ್ನು ಒಮ್ಮೆ ನೆನಪಿಸಿಕೊಳ್ಳಲೇಬೇಕು. ರಂಗಸ್ಥಳದಲ್ಲಿ ‘ಬಲಗೋಣು ಮಾಣಿ’ಯಾಗಿ ಮೋಡಿ ಮಾಡಿದ ಕಲಾವಿದ, ಇಂದು ಬೆಂಗಳೂರಿನ ನೆಲದಲ್ಲಿ ನೂರಾರು ಶಿಷ್ಯರಿಗೆ ಯಕ್ಷಗಾನದ ದೀಕ್ಷೆ ನೀಡುತ್ತಿರುವ ಗುರು. ಇದು ಕೇವಲ ಒಬ್ಬ ಕಲಾವಿದನ ಪಯಣವಲ್ಲ; ಕಲೆಯ ಮೇಲಿನ ಪ್ರೀತಿ, ಶ್ರಮ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ಒಂದು ಸುಂದರ ಯಕ್ಷಯಾನ. ಆ ಯಾನದ ಒಂದು ಮಹತ್ವದ ಮೈಲಿಗಲ್ಲು ‘ಯಕ್ಷಪಥ’