← All posts
ಕಲೆ ಎಂದರೆ ಬದಲಾವಣೆಯೊಂದಿಗೆ ಬೆಳೆಯುವ ಮಾಧ್ಯಮ

ಕಲೆ ಎಂದರೆ ಬದಲಾವಣೆಯೊಂದಿಗೆ ಬೆಳೆಯುವ ಮಾಧ್ಯಮ

ಕಲೆಗೆ ಪರಂಪರೆಯೂ ಬೇಕು, ಹೊಸತನವೂ ಬೇಕು. ಒಂದು ಜಾಹಿರಾತಿನ ಮೂಲಕ ಕಲೆ, ಕಲಾವಿದರು ಮತ್ತು ನಮ್ಮ ಸಂಸ್ಕೃತಿ ಹೆಚ್ಚಿನ ಜನರನ್ನು ತಲುಪುತ್ತಿದ್ದರೆ, ಅದರಲ್ಲಿ ತಪ್ಪಿಗಿಂತ ಅವಕಾಶವನ್ನು ಕಾಣೋಣ. ಭಿನ್ನ ಅಭಿರುಚಿಗಳನ್ನು ಗೌರವಿಸಿ, ಕಲೆಯನ್ನು ವಿಭಜಿಸುವುದಕ್ಕಿಂತ ಬೆಳೆಸುವ ಮನಸ್ಥಿತಿ ನಮ್ಮದಾಗಲಿ.

ಕಲೆ ಎಂದರೆ ಬದಲಾವಣೆಯೊಂದಿಗೆ ಬೆಳೆಯುವ ಮಾಧ್ಯಮ

ಜಾಹಿರಾತು ಒಂದು ಒಳ್ಳೆಯ ಉದ್ದೇಶದಿಂದ ಮೂಡಿಬಂದಿದ್ದರೆ, ಅದರಲ್ಲಿ ತಪ್ಪು ಯಾಕೆ ಹುಡುಕಬೇಕು ಎಂಬುದೇ ಮೊದಲ ಪ್ರಶ್ನೆಯಾಗಬೇಕು. ಅದರಲ್ಲೂ ಕಲೆಯನ್ನು ಪ್ರೋತ್ಸಾಹಿಸುವ, ಕಲಾವಿದರನ್ನು ಜನರಿಗೆ ಪರಿಚಯಿಸುವ ಮತ್ತು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಇನ್ನಷ್ಟು ಜನರಿಗೆ ತಲುಪಿಸುವ ಪ್ರಯತ್ನವಾಗಿದ್ದರೆ, ಅದನ್ನು ಸ್ವಾಗತಿಸುವ ಮನಸ್ಥಿತಿ ನಮ್ಮಲ್ಲಿರಬೇಕು.

ಯಕ್ಷಗಾನದಲ್ಲಿಯೇ ಮಟ್ಟು-ತಿಟ್ಟು ಹಾಗೂ ಮೂಲ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುವ ಕಲಾವಿದರು ಇದ್ದಾರೆ. ಅದನ್ನೇ ಶ್ರೇಷ್ಠವೆಂದು ಸ್ವೀಕರಿಸುವ ಪ್ರೇಕ್ಷಕರೂ ಇದ್ದಾರೆ. ಅದೇ ಸಮಯದಲ್ಲಿ ಕಲೆಯಲ್ಲಿ ಹೊಸತನ, ವಿಭಿನ್ನ ಪ್ರಯೋಗ ಮತ್ತು ಆಧುನಿಕತೆಯನ್ನು ಇಷ್ಟಪಡುವ ಪ್ರೇಕ್ಷಕರೂ ಇದ್ದಾರೆ. ಅವರ ಅಭಿರುಚಿಗೆ ತಕ್ಕಂತೆ ಕಲೆಯನ್ನು ಹೊಸ ರೂಪದಲ್ಲಿ ಪ್ರಸ್ತುತಪಡಿಸುವ ಸಂಸ್ಥೆಗಳು ಮತ್ತು ಕಲಾವಿದರೂ ಇದ್ದಾರೆ.

ಹೀಗಿರುವಾಗ “ಇದು ಮಾತ್ರ ಸರಿ, ಅದು ತಪ್ಪು” ಎಂದು ನಿರ್ಧರಿಸುವ ಅಧಿಕಾರ ಯಾರಿಗೂ ಇಲ್ಲ. ಕಲೆ ಎಂದರೆ ಅದು ಕಾಲದೊಂದಿಗೆ ಬೆಳೆಯುವ, ಬದಲಾಗುವ ಮತ್ತು ಹೊಸ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಜೀವಂತ ಮಾಧ್ಯಮ.

ಪರ-ವಿರೋಧಗಳು ಪ್ರತಿಯೊಂದು ಕ್ಷೇತ್ರದಲ್ಲಿಯೂ ಇರುತ್ತವೆ. ಅಭಿಪ್ರಾಯ ಭಿನ್ನವಾಗಿರುವುದು ಸಹಜ. ಆದರೆ ಒಂದು ಸಂಸ್ಥೆ ತನ್ನ ಜಾಹಿರಾತಿನಲ್ಲಿ ನಮ್ಮ ಕಲೆ, ಕಲಾವಿದ ಅಥವಾ ಸಂಸ್ಕೃತಿಯನ್ನು ಬಳಸಿಕೊಂಡು ಮತ್ತಷ್ಟು ಜನರಿಗೆ ಪರಿಚಯಿಸುತ್ತಿದೆ ಎಂದರೆ, ಅದರಲ್ಲಿ ಮೊದಲು ಕಾಣಬೇಕಾದದ್ದು ತಪ್ಪಲ್ಲ, ಅದು ಅವಕಾಶ. ಇಂತಹ ಪ್ರಯತ್ನಗಳಿಂದ ಕಲಾವಿದರಿಗೆ ಹೆಚ್ಚಿನ ವೇದಿಕೆ ಸಿಗುತ್ತದೆ, ಕಲೆ ಹೊಸ ಪ್ರೇಕ್ಷಕರನ್ನು ತಲುಪುತ್ತದೆ ಮತ್ತು ನಮ್ಮ ಸಾಂಸ್ಕೃತಿಕ ಹಿರಿಮೆ ಇನ್ನಷ್ಟು ದೂರಕ್ಕೆ ಪಸರಿಸುತ್ತದೆ. ಅದನ್ನು ಟೀಕಿಸುವುದಕ್ಕಿಂತ, ಅದರ ಹಿಂದಿರುವ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.

ತಪ್ಪು ಹುಡುಕುವ ಮನಸ್ಥಿತಿಗಿಂತ, ಕಲೆಯನ್ನು ಬೆಳೆಸುವ ಮನಸ್ಥಿತಿ ನಮ್ಮಲ್ಲಿರಬೇಕು. ಏಕೆಂದರೆ ನಾವು ತಪ್ಪು ಎಂದುಕೊಂಡು ನೋಡುವುದೆಲ್ಲವೂ ತಪ್ಪಾಗಬೇಕೆಂದಿಲ್ಲ; ಕೆಲವೊಮ್ಮೆ ನಮ್ಮ ದೃಷ್ಟಿಕೋನವೇ ಬದಲಾಗಬೇಕಿರುತ್ತದೆ. ಕಲೆಯನ್ನು ವಿಭಜಿಸುವುದಕ್ಕಿಂತ, ಗೌರವಿಸಿ, ಅವುಗಳ ವೈವಿಧ್ಯತೆಯನ್ನು ಸ್ವೀಕರಿಸುವ ಮನಸ್ಥಿತಿಯೇ ನಮ್ಮ ಸಂಸ್ಕೃತಿಯನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತದೆ