ಯುಗ ಪ್ರವರ್ತಕ ಜಿ.ಆರ್. ಕಾಳಿಂಗ ನಾವಡರು ನಮ್ಮನ್ನಗಲಿ ಇಂದು 36 ವರ್ಷಗಳು ಕಳೆದಿವೆ...
ನಾನಂತೂ ಆಗ ಹುಟ್ಟೇ ಇರಲಿಲ್ಲ. ಆದರೆ ನಿಮ್ಮ ಧ್ವನಿ, ನಿಮ್ಮ ಹಾಡುಗಳು, ನಿಮ್ಮ ಕಲೆಯ ಮಹಿಮೆ ಇಂದಿಗೂ ನಮ್ಮ ಹೃದಯಗಳಲ್ಲಿ ಜೀವಂತವಾಗಿವೆ.

ನೋಡಲಿಲ್ಲ. ಆದರೆ ನಿಮ್ಮ ಹಾಡುಗಳನ್ನು ಕೇಳಿದಾಗ ಮನಸ್ಸೇ ಮೈಮರೆತು ಹೋಗುತ್ತದೆ.
ನಿಮ್ಮ ಸ್ವರದ ಮಧುರತೆ, ಭಾವನೆಯ ಆಳ, ಕಲೆಯ ಅಮರತ್ವ ಇವೆಲ್ಲವೂ ನಮ್ಮನ್ನು ಸ್ಪರ್ಶಿಸುತ್ತವೆ.

ನೀವು ದೇಹತಃ ನಮ್ಮೊಂದಿಗಿಲ್ಲದಿದ್ದರೂ, ನಿಮ್ಮ ಕಲೆ ಎಂದಿಗೂ ಅಜರಾಮರ.
ನಿಮ್ಮ ಹಾಡುಗಳು ಎಂದೆಂದಿಗೂ ಜಿನುಗುತ್ತಿರಲಿ.. ಮಿನುಗುತ್ತಿರಲಿ..
ಉಸಿರಿರುವ ತನಕ ನಿಮ್ಮ ನೆನಪು, ನಿಮ್ಮ ಸ್ವರ ನಮ್ಮ ಹೃದಯಗಳಲ್ಲಿ ಸದಾ ಮೊಳಗುತ್ತಲೇ ಇರುತ್ತದೆ 🙏