ಯಕ್ಷಗಾನಕ್ಕಾಗಿ ವಿಶೇಷವಾಗಿ ರೂಪುಗೊಂಡಿರುವ Tititai Events ಇದೀಗ ಸಾರ್ವಜನಿಕರ ಬಳಕೆಗೆ ತೆರೆದುಕೊಂಡಿದೆ. ಒಬ್ಬ ಯಕ್ಷಗಾನ ಅಭಿಮಾನಿ, ಪೋಷಕ, ಕಲಾವಿದ ಹಾಗೂ ಸಂಘಟಕನ ದೃಷ್ಟಿಕೋನದಿಂದ ಯೋಚಿಸಿ ನಿರ್ಮಿಸಲಾದ ಈ ವೇದಿಕೆ, ಯಕ್ಷಗಾನದ ವಿವಿಧ ಆಯಾಮಗಳನ್ನು ಒಂದೇ ಸೂರಿನಡಿ ತರುವ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ.
ಮೊದಲ ಬಾರಿಗೆ ಯಕ್ಷಗಾನ ಕಲಾವಿದರು, ಮೇಳಗಳು, ಪ್ರಸಂಗಗಳು, ಯಕ್ಷಗಾನಕ್ಕೆ ಸಂಬಂಧಿಸಿದ ಸ್ಟೋರ್, ಇವೆಂಟ್ಸ್ (ಆಟಗಳು), ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಹಾಗೂ ಸಂಕಷ್ಟದಲ್ಲಿರುವ ಕಲಾವಿದರಿಗೆ ದೇಣಿಗೆ ನೀಡುವ ವೇದಿಕೆ ಸೇರಿದಂತೆ ಹಲವು ಸೇವೆಗಳನ್ನು ಒಂದೇ ಅಪ್ಲಿಕೇಶನ್‌ನಲ್ಲಿ ಒದಗಿಸುವ ಉದ್ದೇಶದಿಂದ ಈ ಯೋಜನೆ ರೂಪುಗೊಂಡಿದೆ.
ಈ ಡಿಜಿಟಲ್ ವೇದಿಕೆಯ ಹಿಂದಿರುವ ಕನಸುಗಾರರು ಅಪ್ಪಟ ಯಕ್ಷಗಾನ ಅಭಿಮಾನಿಯಾದ ಸಂಪತ್ ಕುಡೇರಿ. ಯಕ್ಷಗಾನದ ಮೇಲಿನ ಅಪಾರ ಆಸಕ್ತಿ, ಯಕ್ಷಗಾನ ಪ್ರದರ್ಶನಗಳ ಸಂಘಟನೆ ಹಾಗೂ ಕಲೆಯ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತ ಬಂದಿರುವ ಅವರು, ಯಕ್ಷಗಾನ ಸಮುದಾಯದ ಅಗತ್ಯಗಳನ್ನು ಮನಗಂಡು ಈ ವೇದಿಕೆಯನ್ನು ಸೃಷ್ಟಿಸಿದ್ದಾರೆ.
ಇಂದಿನ ಡಿಜಿಟಲ್ ಯುಗದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಪಡೆಯುವುದು ಸುಲಭದ ವಿಷಯವಲ್ಲ. ಯಕ್ಷಗಾನದ ಕುರಿತಾಗಿ ಪ್ರತ್ಯೇಕ ಹಾಗೂ ಸಮಗ್ರ ಮಾಹಿತಿಯನ್ನು ಒದಗಿಸುವ ತಾಣಗಳು ಕಡಿಮೆಯೇ ಇವೆ. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದ ತಿತ್ತಿತ್ತೈ ಈವೆಂಟ್ಸ್ ಕಲಾವಿದರು, ಕಲಾಭಿಮಾನಿಗಳು, ಸಂಘಟಕರು ಮತ್ತು ಪ್ರೇಕ್ಷಕರನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ಕಾರ್ಯಕ್ಕೆ ಮುಂದಾಗಿದೆ.
ಸದ್ಯಕ್ಕೆ ಲಭ್ಯವಿರುವ ವೈಶಿಷ್ಟ್ಯಗಳ ಜೊತೆಗೆ, ಮುಂದಿನ ದಿನಗಳಲ್ಲಿ ಇನ್ನೂ ಹಲವು ಆಕರ್ಷಕ ಹಾಗೂ ಉಪಯುಕ್ತ ಸೌಲಭ್ಯಗಳನ್ನು ಪರಿಚಯಿಸುವ ಯೋಜನೆ ಇದೆ. ಯಕ್ಷಗಾನ ಲೋಕಕ್ಕೆ ತಂತ್ರಜ್ಞಾನದ ನೆರವಿನಿಂದ ಹೊಸ ಆಯಾಮವನ್ನು ನೀಡುವ ಈ ಪ್ರಯತ್ನಕ್ಕೆ ಯಕ್ಷಗಾನ ಪ್ರೇಮಿಗಳ ಬೆಂಬಲ ಅಗತ್ಯವಾಗಿದೆ.
ಮುಂದಿನ ದಿನಗಳಲ್ಲಿ ಪ್ರತಿಯೊಂದು ಮೇಳದ ತಿರುಗಾಟ, ಆಟಗಳ ವೇಳಾಪಟ್ಟಿ, ಆಟ ನಡೆಯುವ ಸ್ಥಳದ ಮಾಹಿತಿ, ಕಲಾವಿದರ ವಿವರಗಳು ಹಾಗೂ ಯಕ್ಷಗಾನಕ್ಕೆ ಸಂಬಂಧಿಸಿದ ಪರಿಕರಗಳ ಮಾಹಿತಿಯು ನಿಯಮಿತವಾಗಿ ಈ ವೇದಿಕೆಯಲ್ಲಿ ಲಭ್ಯವಾಗುವಂತಾಗಬೇಕು. ಯಕ್ಷಗಾನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಒಂದೇ ಸ್ಥಳದಲ್ಲಿ ಸಿಗುವ ಸಮಗ್ರ ಡಿಜಿಟಲ್ ಕೇಂದ್ರವಾಗಿ ಇದು ಬೆಳೆಯಲಿ ಎಂಬುದು ನಮ್ಮ ಆಶಯ.
ಹೆಚ್ಚಿನ ಮಾಹಿತಿಗಾಗಿ:
🌐tititai - Stage, Screen & Beyond
Link: https://www.tititai.com/
(ಆಂಡ್ರಾಯ್ಡ್ ಮತ್ತು iOS ಅಪ್ಲಿಕೇಶನ್‌ಗಳು ಶೀಘ್ರದಲ್ಲೇ ಲಭ್ಯವಾಗಲಿವೆ.)
General
ತಿತ್ತಿತ್ತೈ ಈವೆಂಟ್ಸ್: ಯಕ್ಷಗಾನದ ಡಿಜಿಟಲ್ ಲೋಕಕ್ಕೆ ಹೊಸ ಹೆಜ್ಜೆ
💬 0 Comments
Share your thoughts about this post
Leave a Comment
Your comment will appear after admin approval.